"777 ಚಾರ್ಲಿ" ಬೆಡಗಿ ಸಂಗೀತ

By Sangetha on 18th Jul 2018

"777 ಚಾರ್ಲಿ" ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಈ ಚಿತ್ರಕ್ಕಾಗಿ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿ ಬ್ಯುಸಿ ಆಗಿತ್ತು ಆದರೆ ಚಿತ್ರಕ್ಕೆ ಈಗ ನಾಯಕ ನಟಿ ಸಿಕ್ಕಿರುವುದಾಗಿ ಸ್ವತಃ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡದವರು ಸೋಶಿಯಲ್ ಮೀಡಿಯಾ ದಲ್ಲಿ ಹೇಳಿದ್ದಾರೆ ಅವರೇ ನಟಿ ಸಂಗೀತ.


ಸಂಗೀತ ಮೂಲತಃ ಟಿ ವಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅನುಭವ ಉಳ್ಳವರು ಹರ ಹರ ಮಹಾದೇವ ಮತ್ತು ಮಹಾಕಾಳಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಸಂಗೀತ ಈಗ ರಕ್ಷಿತ್ ಶೆಟ್ಟಿ ಅಭಿನಯದ "777 ಚಾರ್ಲಿ" ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ನಟಿ ಸಂಗೀತ.