ಹರಿಪ್ರಿಯಾ ವಿರುದ್ಧ ದೂರು

By Soojidaara on 18th May 2019

ಖ್ಯಾತ ನಟಿ ಹರಿಪ್ರಿಯಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಹೊಸತೇನಲ್ಲ ಅಂತೆಯೇ ಅವರು ಸೂಜಿದಾರ ಎಂಬ ಒಂದು ಅದ್ಭುತ ಚಿತ್ರದಲ್ಲಿ ನಾಯಕಿ ನಟಿ ಆಗಿ ಅಭಿನಯಿಸಲು ಒಪ್ಪಿ ಆ ಚಿತ್ರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಚಿತ್ರದ ಬಗ್ಗೆ ಹರಿಪ್ರಿಯಾ ತಮಗಿರುವ ನೋವನ್ನು ಫೇಸ್ಬುಕ್ ಮೂಲಕ ಹೇಳಿಕೊಂಡಿದ್ದರು. ಅದರಲ್ಲಿ ಅವರು ಹೇಳಿಕೊಂಡಂತೆ ಚಿತ್ರ ತಂಡ ತನ್ನ ಬಳಿ ಬಂದು ಹೇಳಿದ ಕಥೆಯೇ ಬೇರೆ ನಂತರ ಚಿತ್ರ ಬಿಡುಗಡೆಗೊಂಡು ಚಿತ್ರವನ್ನು ವೀಕ್ಷಿಸಿದಾಗ ಅದರಲ್ಲಿರುವ ಅಂಶಗಳೇ ಬೇರೆ ಹೀಗಾಗಿ ನನ್ನ ಅಭಿಮಾನಿಗಳು ಚಿತ್ರದ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಹೇಳಿಕೊಂಡಿದ್ದರು ಅಭಿಮಾನಿಗಳ ಪ್ರಕಾರ ಚಿತ್ರದಲ್ಲಿ ಹರಿಪ್ರಿಯಾ ಅವರನ್ನು ಕೊಂಚ ಸ್ವಲ್ಪವೇ ತೆರೆಯ ಮೇಲೆ ತಂದಿದ್ದಾರೆ ಮತ್ತೆ ಇನ್ನುಳಿದ ಪಾತ್ರಗಳು ತೆರೆಯ ಮೇಲೆ ಬಹಳವಾಗಿ ಕಾಣಸಿಗುತ್ತವೆ ಹೀಗಾಗಿ ನಿಮ್ಮನ್ನು ಇನ್ನು ಹೆಚ್ಚು ತೆರೆಯ ಮೇಲೆ ನೋಡುವ ಆಸೆ ನಮಗಿತ್ತು ಎಂದು ಅಭಿಮಾನಿಗಳನ್ನು ಭೇಟಿಯಾದಾಗ ಹೇಳಿದ್ದರಂತೆ ಆದ ಕಾರಣ ಚಿತ್ರತಂಡ ಮಾಡಿದ ಮೋಸದ ಬಗ್ಗೆ ಧೈರ್ಯವಾಗಿ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಹೇಳುವುದರ ಜೊತೆಗೆ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದರು ಹರಿಪ್ರಿಯಾ.


ಇದು ನಟಿ ಹರಿಪ್ರಿಯಾ ಅವರ ವಾದವಾದರೆ ಚಿತ್ರತಂಡದ ವಾದವೇ ಬೇರೆ. ಹರಿಪ್ರಿಯಾ ಅವರನ್ನು ಚಿತ್ರದ ಪಾತ್ರಕ್ಕಾಗಿ ಆಯ್ಕೆ ಮಾಡಿದಾಗ ಅವರ ಬಳಿ ನಾವು ಹೇಳಿದ ಕಥೆಯೇ ಚಿತ್ರದಲ್ಲೂ ಇರುವುದು. ಚಿತ್ರದಲ್ಲಿ ಹರಿಪ್ರಿಯಾ ಅವರ ಪಾತ್ರದಂತೆ ಇನ್ನುಳಿದ ಪಾತ್ರಗಳಿಗೂ ಹೆಚ್ಚು ಪ್ರಾಮುಖ್ಯತೆ ಇದ್ದು ಆ ನಟ ನಟಿಯರ ಯಶಸ್ಸನ್ನು ಸಹಿಸಲಾರದೆ ಹರಿಪ್ರಿಯಾ ಈ ರೀತಿ ಚಿತ್ರದ ಬಗ್ಗೆ ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ನಟಿಯೇ ಈ ರೀತಿ ನನಗೆ ಹೇಳಿದ ಕಥೆಯಷ್ಟೇ ಚಿತ್ರದಲ್ಲಿ ಮೂಡಿಬಂದಿದ್ದರೆ ಚಿತ್ರ ಯಶಸ್ಸು ಕಾಣುತಿತ್ತು ಎಂದು ಹೇಳಿದರೆ ಚಿತ್ರ ನಿಲ್ಲುವುದಾದರೂ ಹೇಗೆ ನಟಿಯೇ ಈ ರೀತಿ ತಪ್ಪು ಪ್ರಚಾರ ಮಾಡುತ್ತಿರುವುದರಿಂದ ಚಿತ್ರದ ಕಲೆಕ್ಷನ್ ಗೂ ಇದು ಪೆಟ್ಟು ಬಿದ್ದಂತಾಗಿದೆ ಆದ ಕಾರಣ ನಟಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ವಾಣಿಜ್ಯ ಮಂಡಳಿಗೆ ದೂರನ್ನು ನೀಡಿದ್ದಾರೆ ಚಿತ್ರತಂಡದವರು.


ಏನೇ ಆದರೂ ಒಬ್ಬ ಚಿತ್ರ ಪ್ರೇಕ್ಷಕ ಬಯಸುವುದು ಒಂದೊಳ್ಳೆ ಸದಭಿರುಚಿಯ ಚಿತ್ರವನ್ನು ಹೀಗಾಗಿ ಚಿತ್ರತಂಡದಲ್ಲಿ ಏನೇ ಬಿರುಕುಗಳು ಇದ್ದರು ಸಹ ಅದನ್ನು ಕೂತು ಬಗೆಹರಿಸಿಕೊಂಡರೆ ಈ ರೀತಿ ಚಿತ್ರದ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಮತ್ತು ನಿರ್ಮಾಪಕ ಪಟ್ಟ ಶ್ರಮಕ್ಕೂ ಬೆಲೆ ಕೊಟ್ಟಂತಾಗುತ್ತದೆ. ಈ ರೀತಿ ವಾದ ವಿವಾದಗಳಿಗೆ ಜಾಗಕೊಡದೆ ಸಮಸ್ಯೆಯನ್ನು ತಮ್ಮಲ್ಲೇ ಬಗೆಹರಿಸಿಕೊಂಡು ಚಿತ್ರ ಕಲೆಕ್ಷನ್ ಗೆ ಬೀಳುವ ಹೊಡೆತವನ್ನು ತಪ್ಪಿಸುವುದು ಮತ್ತು ನಿರ್ಮಾಪಕನಿಗೆ ಆಗುವ ನಷ್ಟವನ್ನು ತಡೆಯಿಡುವುದು ಚಿತ್ರತಂಡ ಕೈಯಲ್ಲೇ ಇದೆ ಎನ್ನುವುದು ನಮ್ಮ ಅಭಿಪ್ರಾಯ.