ಸ್ಯಾಂಡಲ್ವುಡ್ ನಿಂದ ಬಾಲಿವುಡ್ ನೆಡೆಗೆ ಅನುಪಮಾ ಗೌಡ ಪಯಣ

By Anupama Gowda on 13th Jun 2019

ಹೌದು ಅಕ್ಕ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಕನ್ನಡದ ಚೆಲುವೆ ಅನುಪಮಾ ಗೌಡ. ಅಕ್ಕ ಧಾರಾವಾಹಿಯ ನಂತರ ಬಿಗ್ ಬಾಸ್ ಮತ್ತು ಅನೇಕ ಮನರಂಜನಾ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಅಂತೆಯೇ ನಟಿ ಅನುಪಮಾ ಅಭಿನಯಿಸಿದ್ದ ಆ ಕರಾಳ ರಾತ್ರಿ ಚಿತ್ರ ಕೂಡ ತೆರೆಕಂಡಿತ್ತು. ಇದೀಗ ನಟಿ ಅನುಪಮಾ ಸ್ಯಾಂಡಲ್ವುಡ್ ನಿಂದ ಬಾಲಿವುಡ್ ನೆಡೆಗೆ ತಮ್ಮ ಪಯಣವನ್ನು ಮುಂದುವರಿಸಿದ್ದು ಹಿಂದಿ ಭಾಷೆಯ ಒಂದು ಕಿರುಚಿತ್ರದಲ್ಲಿ ನಟಿಸಲು ಅವಕಾಶ ಒದಗಿಸಿಕೊಂಡಿದ್ದಾರೆ. ಈ ಕಿರುಚಿತ್ರದ ಹೆಸರು ದಿ ಫಾಲನ್.


ಈ ಕಿರುಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಕನ್ನಡದಲ್ಲಿ ಊರ್ವಿ ಎಂಬ ಚಿತ್ರನಿರ್ದೇಶನ ಮಾಡಿದ ನಿರ್ದೇಶಕ ಪ್ರದೀಪ್ ವರ್ಮಾ. ಇನ್ನು ಈ ಕಿರುಚಿತ್ರ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆಯಂತೆ ಈ ಚಿತ್ರದ ಫೋಟೋಶೂಟ್ ಅನ್ನು ಲಢಾಕ್, ಮನಾಲಿ ಗಳಲ್ಲಿ ನಡೆಸಲು ಚಿತ್ರತಂಡ ಸಜ್ಜಾಗಿದೆ ಮತ್ತು ಈ ಕಿರುಚಿತ್ರದ ಶೂಟಿಂಗ್ ಬಹುತೇಕ 30 ದಿನಗಳ ಕಾಲ ನಡೆಯಲಿದೆಯಂತೆ. ಏನೇ ಆದರೂ ಕನ್ನಡ ಹುಡುಗಿ ಅನುಪಮಾ ಬೇರೆ ಭಾಷೆಗಳಲ್ಲೂ ಒಳ್ಳೆ ಹೆಸರು ಮಾಡಲಿ ಎನ್ನುವುದೇ ನಮ್ಮ ತಂಡದ ಆಶಯ.