ಸ್ಯಾಂಡಲ್ವುಡ್ ಕ್ವೀನ್ ರಮ್ಯಾ 2019 ರ ನಂತರ ಮತ್ತೆ ಬೆಳ್ಳಿತೆರೆಗೆ ಬರ್ತಾರಾ

By Ramya on 9th Jun 2018

ಹೌದು ಈಗೊಂದು ಗೊಂದಲ ಎಲ್ಲರಲ್ಲೂ ಮನೆ ಮಾಡಿದೆ. ಕಾರವೇನೆಂದು ಹುಡುಕುತ್ತ ಹೋದರೆ ಸಿಗುವುದು ನಟ ರಕ್ಷಿತ್ ಶೆಟ್ಟಿ ಅವರಿಗೆ ರಮ್ಯಾ ಕೊಟ್ಟ ಉತ್ತರ. ಸದ್ಯ ಸಿನಿಮಾದಿಂದ ದೂರ ಉಳಿದಿರುವ ನಟಿ ರಮ್ಯಾ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅಂತೆಯೇ ಅವರು ಸಿನಿಮಾ ಮಾಡುವುದಿಲ್ಲ ಎನ್ನುವುದು ಖಚಿತವಾಗಿತ್ತು. ಆರ್ಯನ್ ಮತ್ತು ನಾಗರಹಾವು ಚಿತ್ರಗಳ ನಂತರ ರಮ್ಯಾ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿಲ್ಲ ಆದರೆ ಈಗ ರಮ್ಯಾ ಮತ್ತೆ ಸಿನಿಮಾ ಮಾಡಬಹುದು ಎನ್ನುವ ಊಹಾಪೋಹಗಳು ಹೆಚ್ಚಾಗಿವೆ.


ಇದಕೆಲ್ಲ ಕಾರಣವಿಷ್ಟೇ ನಟ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ "ಅವನೇ ಶ್ರೀಮನ್ ನಾರಾಯಣ" ಚಿತ್ರದ ಟ್ರೈಲರ್ ಅನ್ನು ನೋಡಿ ಮೆಚ್ಚಿಕೊಂಡಿರುವ ರಮ್ಯಾ ನಟ ರಕ್ಷಿತ್ ಶೆಟ್ಟಿ ಅವರಿಗೆ ಟ್ವಿಟ್ಟರ್ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ರಮ್ಯಾ ಅವರ ಮೆಚ್ಚುಗೆಗೆ ನಟ ರಕ್ಷಿತ್ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ ಜೊತೆಗೆ ನಿಮ್ಮನು ಮತ್ತೆ ಬೆಳ್ಳಿತೆರೆಮೇಲೆ ನೋಡುವ ಆಸೆ ಎಂದು ಹೇಳಿದ್ದಾರೆ ಅದಕ್ಕೆ ಉತ್ತರಿಸಿರುವ ರಮ್ಯಾ after 2019 ಎಂದು ಟ್ವೀಟ್ ಮಾಡಿದ್ದಾರೆ. ರಮ್ಯಾ ಮಾಡಿರುವ ಈ ಟ್ವೀಟ್ ಸದ್ಯ ಸ್ಯಾಂಡಲ್ವುಡ್ ಗೆ ಮತ್ತೆ ರಮ್ಯಾ ಬರಲಿದ್ದಾರಾ ಎನ್ನುವ ಅನುಮಾನವನ್ನು ಹುಟ್ಟುಹಾಕಿದೆ. ಈಗ ರಾಜಕೀಯದಲ್ಲಿ ಬ್ಯುಸಿ ಇರುವ ರಮ್ಯಾ ಮತ್ತೆ ಸಿನಿಮಾ ಮಾಡುತ್ತಾರಾ ಅವರ ಟ್ವೀಟ್ ಗೆ ಸರಿಯಾದ ಅರ್ಥ ಏನು ಎಂಬುದು 2019 ರ ನಂತರ ತಿಳಿಯಬೇಕಿದೆ.

Ramya