"ಸೂಜಿದಾರ" ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ ಹರಿಪ್ರಿಯಾ

By Haripriya on 14th May 2019

ಹರಿಪ್ರಿಯಾ ಕನ್ನಡ ಹೆಸರಾಂತ ನಟಿ ನೀರ್ ದೋಸೆ ಅಂತಹ ವಿಭಿನ್ನ ಚಿತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಹರಿಪ್ರಿಯಾ ನಂತರ "ಸೂಜಿದಾರ" ಎನ್ನುವ ವಿಭಿನ್ನ ಕಥಾಹಂದರವಿರುವ ಚಿತ್ರವನ್ನು ಕೈಗೆತ್ತಿಕೊಂಡು ಸುದ್ದಿ ಮಾಡಿದ್ದರು. ಅಂತೆಯೇ ಚಿತ್ರ ಮೊನ್ನೆಯಷ್ಟೇ ಬಿಡುಗಡೆಗೊಂಡು ಪ್ರದರ್ಶನ ಕಾಣುತ್ತಿದೆ ಈಗಿರುವಾಗಲೇ ಚಿತ್ರದ ಬಗ್ಗೆ ತಮಗಿರುವ ಬೇಸರವನ್ನು ಅವರು ಹೊರಹಾಕಿದ್ದು "ಡಾಟರ್ ಆಫ್ ಪಾರ್ವತಮ್ಮ" ಚಿತ್ರದ ಪತ್ರಿಕಾಗೋಷ್ಠಿ ವೇಳೆ.


ಹೌದು ಸೂಜಿದಾರ ಚಿತ್ರವನ್ನು ಹರಿಪ್ರಿಯಾ ಕೈಗೆತ್ತಿಕೊಳ್ಳಲು ಮುಖ್ಯ ಕಾರಣ ಚಿತ್ರದಲ್ಲಿರುವ ಅವರ ಪಾತ್ರ ಆಗಾಗಿ ಈ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದ್ದರು. ಹರಿಪ್ರಿಯಾ ಹೇಳುವ ಪ್ರಕಾರ ನಿರ್ದೇಶಕರು ಆ ಪಾತ್ರದ ಸಲುವಾಗಿ ನನ್ನ ಬಳಿ ಬಂದಾಗ ಪಾತ್ರದ ಬಗ್ಗೆ ವಿಮರ್ಶಿಸಿದ ಅಂಶಗಳೇ ಬೇರೆ ಚಿತ್ರ ಬಿಡುಗಡೆಯ ನಂತರ ಅಲ್ಲಿರುವುದೇ ಬೇರೆ. ಚಿತ್ರದಲ್ಲಿ ನನ್ನನು ಹೆಚ್ಚಾಗಿ ತೋರಿಸಿಲ್ಲ ಹಾಗಾಗಿ ನನ್ನ ಅಭಿಮಾನಿಗಳು ಬೆರಸ ವ್ಯಕ್ತಪಡಿಸಿದ್ದಾರೆ ಮತ್ತು ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲವೆಂದು ಅಭಿಮಾನಿಗಳಿಗೆ ಕ್ಷಮೆ ಯಾಚಿಸಿದ್ದಾರೆ.