ಶಿಕ್ಷಕನ ಪಾತ್ರದಲ್ಲಿ ಡಾ. ಶಿವಣ್ಣ

By Drona on 20th Jun 2018

"ದ್ರೋಣ" - ದಿ ಮಾಸ್ಟರ್" ಪ್ರಮೋದ್ ಚಕ್ರವರ್ತಿ ನಿರ್ದೇಶನದ ಚಿತ್ರ. ಚಿತ್ರದ ಫೋಟೋಶೂಟ್ ಈಗಾಗಲೇ ನಡೆದಿದ್ದು ಚಿತ್ರದ ಚಿತ್ರೀಕರಣವನ್ನು ಶುರು ಮಾಡುವ ಕಾರ್ಯದಲ್ಲಿ ಚಿತ್ರತಂಡ ಇದೆ. ಅಂತೆಯೇ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಶಿವಣ್ಣ ಅಭಿನಯಿಸಲಿದ್ದು ಚಿತ್ರದಲ್ಲಿ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಅಂದಹಾಗೆ ಈ ಚಿತ್ರವನ್ನು ಮಹಾದೇವ ಬಿ, ಸಂಗಮೇಶ್ ಬಿ ಮತ್ತು ಶೇಷು ಚಕ್ರವರ್ತಿ ಎಂಬುವವರು ಜಂಟಿಯಾಗಿ ನಿರ್ಮಿಸಲಿದ್ದು ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಪ್ರಮೋದ್ ಚಕ್ರವರ್ತಿ ಅವರು ನಿರ್ವಹಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೆ 22 /06 /2018 ರಂದು ನೆರವೇರಲಿದ್ದು ಚಿತ್ರ ತಂಡ ಈ ಬಗ್ಗೆ ದ್ರೋಣ ಚಿತ್ರದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದೆ.

Drona