ರಾಷ್ಟ್ರ ಪ್ರಶಸ್ತಿ ವಿಜೇತರಾದ ಸಂಚಾರಿ ವಿಜಯ್ ಗೆ ಸಿಕ್ಕಿತು "ದಿ ಬೆಸ್ಟ್ ಆಕ್ಟರ್" ಪಟ್ಟ

By The Best Actor on 17th Jul 2018

ಹೌದು "ನಾನು ಅವನಲ್ಲ ಅವಳು" ಚಿತ್ರದಂತಹ ಚಿತ್ರದಲ್ಲಿ ನಟಿಸಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ ಶ್ರೇಷ್ಠ ನಟ ಸಂಚಾರಿ ವಿಜಯ್. ಈಗ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಒಂದು ಎಲ್ಲೆಡೆ ಸದ್ದು ಮಾಡುತ್ತಿದೆ. "ದಿ ಬೆಸ್ಟ್ ಆಕ್ಟರ್" ಸಂಚಾರಿ ವಿಜಯ್ ಅಭಿನಯಿಸುತ್ತಿರುವ ಮುಂದಿನ ಚಿತ್ರ. ಈ ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಎಂಬುವರ ನಿರ್ದೇಶನವಿರಲಿದ್ದು ದಿನೇಶ್ ವೈದ್ಯ ಎಂಬುವರ ನಿರ್ಮಾಣ ಚಿತ್ರಕ್ಕಿದೆ.