ರಾಮ್ ಗೋಪಾಲ್ ವರ್ಮಾ ನಿರ್ಮಾಣದಲ್ಲಿ ಡಾಲಿ ಧನಂಜಯ್

By Bhairava Geetha on 22nd Jun 2018


ಹೌದು ಟಗರು ಚಿತ್ರದಲ್ಲಿನ ತಮ್ಮ ಪಾತ್ರದ ಮೂಲಕ ಬರಿ ಅಭಿಮಾನಿಗಳನ್ನಷ್ಟೇ ಅಲ್ಲದೆ ಅಕ್ಕ ಪಕ್ಕದ ಚಿತ್ರರಂಗದವರನ್ನು ಸೆಳೆದ ನಟ ಧನಂಜಯ್. ಈ ಮೂಲಕವಾಗಿ ತೆಲುಗಿನ ಟಾಪ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕಣ್ಣಿಗೆ ಬಿದ್ದಿದ್ದು ಧನಂಜಯ್. ರಾಮ್ ಗೋಪಾಲ್ ವರ್ಮಾ ಟಗರು ಚಿತ್ರದಲ್ಲಿನ ಡಾಲಿ ಪಾತ್ರವನ್ನು ಮೆಚ್ಚಿಕೊಂಡು ತಮ್ಮ ಫೇಸ್ಬುಕ್ ಮೂಲಕ ಧನಂಜಯ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದರು.


ಅಂತೆಯೇ ಈಗ ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಭೈರವ ಗೀತಾ ಚಿತ್ರದಲ್ಲಿ ಅಭಿನಯಿಸಲು ಧನಂಜಯ್ ಗೆ ಅವಕಾಶ ನೀಡಿದ್ದಾರೆ. ಭೈರವ ಗೀತಾ ಚಿತ್ರದ ಮೂಲಕ ಕನ್ನಡದ ನಟ ಧನಂಜಯ್ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗ ಚಿತ್ರದಲ್ಲಿನ ಧನಂಜಯ್ ಲುಕ್ ರಿವೀಲ್ ಆಗಿದ್ದು ಧನಂಜಯ್ ಸಕ್ಕತ್ ಖಡಕ್ ಆಗಿ ಕಾಣಿಸಿಕೊಂಡಿದ್ದು ಅವರ ಪಾತ್ರದ ಬಗ್ಗೆ ಈಗಾಗಲೇ ಚರ್ಚೆಗಳು ಶುರುವಾಗಿವೆ.