"ರಾಬರ್ಟ್" ಆದ ದರ್ಶನ್

By Robert on 25th Dec 2018

ರಾಬರ್ಟ್ ಆದ ದರ್ಶನ್

ದರ್ಶನ್ ತೂಗುದೀಪ್ ಅಭಿನಯದ 53 ನೇ ಚಿತ್ರದ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅಂತೆಯೇ ದರ್ಶನ್ ಅಭಿನಯದ 53 ನೇ ಚಿತ್ರದ ಶೀರ್ಷಿಕೆ ಬಗ್ಗೆಯೂ ಪ್ರೇಕ್ಷಕರಿಗೆ ಕುತೂಹಲಗಳು ಇದ್ದವು. ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿರುವ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಚಿತ್ರದ ಶೀರ್ಷಿಕೆಯನ್ನು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಅನಾವರಣ ಮಾಡಿದ್ದಾರೆ. ಡಿಸೆಂಬರ್ 25 ರ ಕ್ರಿಸ್ಮಸ್ ಹಬ್ಬದಂದು ದರ್ಶನ್ ಅಭಿನಯದ ಚಿತ್ರದ ಶೀರ್ಷಿಕೆ "ರಾಬರ್ಟ್" ಎಂದು ಚಿತ್ರದ ಪೋಸ್ಟರ್ ಸಮೇತ ಪ್ರೇಕ್ಷಕರಿಗೆ ಹಬ್ಬದ ಸಿಹಿ ನೀಡಿದ್ದಾರೆ.

ಈ ಚಿತ್ರಕ್ಕೆ ಉಮಾಪತಿ ಫಿಲಂಸ್ ನ ಉಮಾಪತಿ ಶ್ರೀನಿವಾಸ್ ಗೌಡ ಅವರ ನಿರ್ಮಾಣವಿರಲಿದ್ದು ತರುಣ್ ಸುಧೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಯಜಮಾನ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿ ಒಡೆಯ ಚಿತ್ರದ ಶೂಟಿಂಗ್ ನಲ್ಲಿ ದರ್ಶನ್ ಪಾಲ್ಗೊಂಡಿದ್ದಾರೆ. ಒಡೆಯ ಚಿತ್ರದ ಚಿತ್ರೀಕರಣದ ನಂತರ ತರುಣ್ ಸುಧೀರ್ ನಿರ್ದೇಶನದ "ರಾಬರ್ಟ್" ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಚಿತ್ರದ ತಾಂತ್ರಿಕ ವರ್ಗ ಇನ್ನು ಅಂತಿಮವಾಗಿಲ್ಲ ಅದಾದ ಬಳಿಕ ತಾಂತ್ರಿಕ ವರ್ಗವನ್ನು ಪರಿಚಯ ಮಾಡಲಿದ್ದಾರೆ ತರುಣ್.

Robert