ರಾಧಿಕಾ ಪಂಡಿತ್ ಮತ್ತೆ ಬೆಳ್ಳಿತೆರೆಗೆ

By Radhika Pandit on 14th Jun 2019

ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ಕೊಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರವ ನಟಿ. ರಾಧಿಕಾ ಎರಡೂವರೆ ವರ್ಷಗಳ ಹಿಂದೆ ನಟ ಯಶ್ ರನ್ನು ಕೈ ಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಂತೆಯೇ ಮದುವೆಯಾದ ಬಳಿಕ ಕೆಲ ದಿನಗಳ ಕಾಲ ಯಾವ ಚಿತ್ರಗಳನ್ನು ರಾಧಿಕಾ ಒಪ್ಪಿಕೊಂಡಿರಲಿಲ್ಲ. ಮದುವೆ ಆಗಿ ಕೆಲ ದಿನಗಳ ಬ್ರೇಕ್ ಪಡೆದಿದ್ದ ನಟಿ ನಂತರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಆದಿಲಕ್ಷ್ಮೀ ಪುರಾಣ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಆದಿಲಕ್ಷ್ಮೀ ಪುರಾಣ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು ಇದೆ ಜೂಲೈ 19 ರಂದು ಬಿಡುಗಡೆಯಾಗಲಿದೆ. ಈ ಮೂಲಕ ಬೆಳ್ಳಿತೆರೆಯ ಮೇಲೆ ರಾಧಿಕಾ ಅಭಿಮಾನಿಗಳು ಮತ್ತೆ ಅವರನ್ನು ಕಣ್ಣು ತುಂಬಿಕೊಳ್ಳಬಹುದು. ಈ ಚಿತ್ರದಲ್ಲಿ ರಾಧಿಕಾರಿಗೆ ಜೋಡಿಯಾಗಿ ರಂಗಿತರಂಗ ಖ್ಯಾತಿಯ ನಟ ನಿರೂಪ್ ಭಂಡಾರಿ ಅಭಿನಯಿಸಿದ್ದಾರೆ.