"ರಾಧಾ ರಮಣ ಧಾರಾವಾಹಿಯಿಂದ ರಾಧಾ ಮಿಸ್ ಹೊರಗೆ"

By Radha Ramana on 19th Apr 2019

ರಾಧಾ ರಮಣ ಸದ್ಯ ಕನ್ನಡ ಕಿರುತರೆ ಇತಿಹಾಸದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿರುವ ಸೀರಿಯಲ್. ಎರಡು ವರ್ಷಗಳ ಹಿಂದೆ ಪ್ರೇಕ್ಷಕರನ್ನು ರಂಜಿಸಲು ಕಿರುತರೆಗೆ ಕಾಲಿಟ್ಟ ನಂತರ ಈ ಸೀರಿಯಲ್ ಪ್ರೇಕ್ಷಕರಿಗೆ ಮೋಡಿ ಮಾಡಿದಂತೂ ನಿಜ. ಅಂದಹಾಗೆ ಈ ಧಾರಾವಾಹಿಯಲ್ಲಿ ಬಹು ಮುಖ್ಯ ಪಾತ್ರವನ್ನು ನಿಭಾಯಿಸುತ್ತಿರುವುದು ಶ್ವೇತಾ ಪ್ರಸಾದ್ ಈ ಹಿಂದೆ ಹಲವಾರು ಸೀರಿಯಲ್ ನಟಿಸಿ ಅನುಭವವಿದ್ದ ಶ್ವೇತಾ ಅವರನ್ನು ಈ ಸೀರಿಯಲ್ ನ ಮುಖ್ಯ ಪಾತ್ರದಲ್ಲಿ ಅಭಿನಯಿಸಲು ನಿರ್ಧಸಿಸಲಾಗಿತ್ತು ಅಂತೆಯೇ ಶ್ವೇತಾ ಸಹ ರಾಧಾ ಮಿಸ್ ಪಾತ್ರದಿಂದ ಬಹು ಬೇಗ ಪ್ರೇಕ್ಷಕರ ಮನ ಗೆದ್ದಿದ್ದರು.


ಆದರೆ ಶ್ವೇತಾ ಅವರು ಈ ಸೀರಿಯಲ್ ನಲ್ಲಿ ಅಭಿನಯಿಸಲು ಒಂದು ವರ್ಷಗಳ ಕಾಲ ಅಗ್ರಿಮೆಂಟ್ ಗೆ ಸಹಿ ಹಾಕಿದ್ದರಂತೆ ಆದರೆ ಈಗ ಅಗ್ರಿಮೆಂಟ್ ನ ಸಮಯ ಮುಗಿದು ಮತ್ತೆ ಒಂದು ವರ್ಷಗಳ ಕಾಲ ಅಭಿನಯಿಸಿದ್ದಾರೆ. ಈಗ ಸ್ವಲ್ಪ ದಿನಗಳ ವಿಶ್ರಾಂತಿಗಾಗಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಸೀರಿಯಲ್ ನಿಂದ ದೂರಸರಿಯಲಿದ್ದಾರಂತೆ. ಇನ್ನು 15 ದಿನಗಳ ಕಾಲ ಪ್ರಸಾರವಾಗುವ ಭಾಗಗಳಲ್ಲಿ ಮಾತ್ರ ರಾಧಾ ಮಿಸ್ ನನ್ನ ಅವರು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.