ಯೋಗರಾಜ್ ಭಟ್ ಹಾಗು ಶಿವಣ್ಣ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿದೆ ಹೊಸ ಸಿನಿಮಾ

By Shivarajkumar on 12th Jul 2018

ಹೌದು ಸದ್ಯ ಪಂಚತಂತ್ರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಯೋಗರಾಜ್ ಭಟ್ ಪಂಚತಂತ್ರ ಚಿತ್ರದ ನಂತರ ಶಿವಣ್ಣ ಅವರ ಜೊತೆ ಹೊಸ ಚಿತ್ರ ಶುರು ಮಾಡಲಿದ್ದಾರೆ. ಅಂದಹಾಗೆ ಈ ಬಗ್ಗೆ ಎಲ್ಲೂ ಇದುವರೆಗೂ ಗುಟ್ಟು ಬಿಟ್ಟು ಕೊಡದ ಯೋಗರಾಜ್ ಭಟ್ ಶಿವಣ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಶಿವಣ್ಣ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಯೋಗರಾಜ್ ಭಟ್ ಪಂಚತಂತ್ರ ಚಿತ್ರದ ನಂತರ ಶಿವಣ್ಣ ಅವರ ಜೊತೆ ಹೊಸ ಚಿತ್ರದಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ ಹಾಗೆ ಆಗಸ್ಟ್ ನಲ್ಲಿ ಚಿತ್ರದ ಟೈಟಲ್ ಲಾಂಚ್ ಮಾಡುವುದಾಗಿ ತಿಳಿಸಿದ್ದಾರೆ ಮತ್ತು ಶಿವಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ.