ಯಶ್ - ರಾಧಿಕಾ ಪಂಡಿತ್ ರ ಮುದ್ದಾದ ಮಗಳು

By Yash ACTOR on 7th May 2019

ಯಶ್ ಮತ್ತು ರಾಧಿಕಾ ಪಂಡಿತ್ ರ ಬಗ್ಗೆ ಗೊತ್ತಿಲ್ಲದೇ ಇರುವವರು ಅತಿ ವಿರಳವೆಂದೇ ಹೇಳಬಹುದು. ಈ ತಾರಾ ದಂಪತಿಗಳ ಬಾಳಲ್ಲಿ ಮುದ್ದಾದ ದೇವತೆಯ ಪ್ರವೇಶವಾಗಿದ್ದು ನಮಗೆಲ್ಲ ತಿಳಿದಿರುವ ಸಂಗತಿ ಅಂತೆಯೇ ಈ ಮುದ್ದು ಕಂದನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಫೋಟೋ ಗಳು ಸುದ್ದಿ ಮಾಡುತ್ತಿದ್ದವು. ರಾಧಿಕಾ ರ ಮಗಳು ಇವಳೇ, ಯಶ್ ರ ಮುದ್ದು ಮಗಳು ಇವಳೇ ಎಂಬ ಅಂತೆಕಂತೆಗಳು ಸುಳಿಯುತ್ತಲೇ ಇದ್ದವು.


ಈ ಸುದ್ದಿಗಳನ್ನೆಲಾ ಸೂಕ್ಶ್ಮವಾಗಿ ಗಮನಿಸಿದ್ದ ಈ ತಾರಾಜೋಡಿಗಳು ತಮ್ಮ ಮಗಳ ನಿಜವಾದ ಫೋಟೋವನ್ನು ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ತೋರಿಸುವುದಾಗಿ ಹೇಳಿಕೊಂಡಿದ್ದರು. ಅಂತೆಯೇ ಈಗ ಯಶ್ ತಮ್ಮ ಫೇಸ್ಬುಕ್ ಖಾತೆಯ ಮೂಲಕ ತಮ್ಮ ಮುದ್ದು ಮಗಳ ಫೋಟೋವನ್ನು ಅಭಿಮಾನಿಗಳಿಗೆಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾರೆ.


ಇದರ ಜೊತೆಗೆ ತಮ್ಮ ಮನಸಿನ ಮಾತನ್ನು ಸಹ ಹೇಳಿದ್ದಾರೆ ಅಂದೇನೆಂದರೆ,

ನೀವು ಹೇಳಿದ್ದೇ ಸರಿ....

ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ❤❤❤❤❤.. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ ❤❤❤❤❤.. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.