ಯಶ್ - ರಾಧಿಕಾ ಪಂಡಿತ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ

By Yash ACTOR on 26th Jun 2019

ಯಶ್ ರಾಧಿಕಾ ಪಂಡಿತ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಮೊನ್ನೆಯಷ್ಟೇ ತಮ್ಮ ಮುದ್ದು ಮಗಳ ನಾಮಕರಣ ಮಾಡಿದ ಯಶ್ ದಂಪತಿ ಮಗಳಿಗೆ ಆಯ್ರ ಎಂದು ನಾಮಕರಣ ಮಾಡಿದ್ದರು ಆಯ್ರ ಎಂದರೆ ಲಕ್ಷ್ಮಿ ಎಂಬ ಅರ್ಥ. ಇದರ ಬೆನ್ನಲ್ಲೇ ಯಶ್ ದಂಪತಿಗಳು ತಾವು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವದಾಗಿಯೂ ರಾಧಿಕಾ ಈಗ ನಾಲ್ಕು ತಿಂಗಳ ಗರ್ಭಿಣಿ ಎಂತಲೂ ಸಿಹಿ ಸುದ್ದಿ ನೀಡಿದ್ದಾರೆ. ಅಭಿಮಾನಿಗಳೇ ಈ ಸುದ್ದಿ ಒಂದು ಕಡೆ ನಂಬಲಸಾದ್ಯವಾದರೂ ಖುಷಿಯ ಸಮಾಚಾರ.