ಮಾಸ್ತಿ ಎಂಬ ಡೈಲಾಗ್ ಮಾಂತ್ರಿಕ

By Maasthi on 17th Jul 2018

ಮಾಸ್ತಿ ಎಂಬ ಸಂಭಾಷಣೆಕಾರ ಕನ್ನಡ ಚಿತ್ರರಂಗದಲ್ಲಿ ಇರುವುದು ಎದೆಷ್ಟೋ ಜನರಿಗೆ ತಿಳಿದಿಲ್ಲ ಆದರೆ ಟಗರು ಎಂಬ ಕನ್ನಡ ಚಿತ್ರಕ್ಕೆ ಸಂಭಾಷಣೆ ಬರೆದ ನಂತರ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಅಂದಹಾಗೆ ಟಗರು ಚಿತ್ರ ಕೇವಲ ಮಾಸ್ತಿ ಅವರಿಗಷ್ಟೇ ಅಲ್ಲದೆ ಹಲವಾರು ಕಲಾವಿದರಿಗೆ ನೆಲೆಯಾಗಿ ನಿಂತಿದೆ. ಮಾಸ್ತಿ ಅವರ ಸಂಭಾಷಣೆಯನ್ನು ಕೇಳಿ ಆನಂದಿಸುವ ಪ್ರೇಕ್ಷಕರು ಪ್ರತಿ ಚಿತ್ರಕ್ಕೂ ಅವರ ಸಂಭಾಷಣೆಯನ್ನೇ ನಿರೀಕ್ಷಿಸುವಂತಾಗಿದೆ ಕೇವಲ ಪ್ರೇಕ್ಷಕರಲ್ಲದೆ ಸ್ವತಃ ಚಿತ್ರ ನಿರ್ಮಾಪಕರೇ ಮಾಸ್ತಿ ಅವರ ಸಂಭಾಷಣೆ ನಮ್ಮ ಚಿತ್ರಕ್ಕೆ ಬೇಕು ಎಂದು ಕೇಳುವಂತಾಗಿದೆ. ಮಾಸ್ತಿ ಸದ್ಯ ಟಗರು ಚಿತ್ರದ ಯಶಸ್ಸಿನ ನಂತರ "ಅಯೋಗ್ಯ", ಕುಸ್ತಿ","ಪಾಪ್ ಕಾರ್ನ್ ಮಂಕಿ ಟೈಗರ್" ಮತ್ತು ಇನ್ನು ಹೆಸರಿಡದ ಚಿತ್ರಗಳಿಗೂ ಸಂಭಾಷಣೆಯನ್ನು ಬರೆಯಲು ಅಸ್ತು ಎಂದಿದ್ದಾರಂತೆ.