ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸಂಗೀತ ಭಟ್

By Sangeetha Bhatt on 22nd Apr 2019

ಹೌದು ಕನ್ನಡದಲ್ಲಿ ಹಲವಾರು ವರ್ಷಗಳಿಂದ ಅಭಿನಯಿಸಿಕೊಂಡು ಬಂದಿರುವ ನಟಿ ಸಂಗೀತ ಭಟ್ ಈ ಹಿಂದೆ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಸಂಗೀತ ಅದೇ ದಾರಾವಾಹಿಗಳಿಂದ ಮನೆಮಾತಾಗಿ ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡಿದ್ದರು. ಆಗೊಂದು ಈಗೊಂದು ಚಿತ್ರಗಳಲ್ಲಿ ಅಭಿನಯಿಸುತ್ತ ಬಂದಿದ್ದರು. ನಟಿ ಸಂಗೀತ 2014 ರಲ್ಲಿ ತಮ್ಮ ಬಹು ಕಾಲದ ಗೆಳಯ ಸುದರ್ಶನ್ ರಂಗಪ್ರಸಾದ್ ಅವರೊಂದಿಗೆ ಹಸೆಮಣೆ ಏರಿದ್ದರು ಸಹ ಅವರ ಫೋಟೋಗಳು ಎಲ್ಲೂ ಕಾಣಿಸಿಕೊಂಡಿರಲಿಲ್ಲ.


ಆದರೆ ಈದೀಗ ನಟಿ ಸಂಗೀತ ಅವರು ತಮ್ಮ ಪತಿಯೊಂದಿಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದು ತಮ್ಮ ಏಳನೇ ವರ್ಷದ ಮದುವೆ ವಾರ್ಷಿಕೋತ್ಸವದ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಮದುವೆ ವಾರ್ಷಿಕೋತ್ಸವವನ್ನು ಸದ್ಯ ಜರ್ಮನಿ ಯಲ್ಲಿ ಆಚರಿಸಿಕೊಳ್ಳುತ್ತಿರುವ ನಟಿ ಸಂಗೀತಾರಿಗೆ ನಮ್ಮ ಕಡೆಯಿಂದಲೂ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.