"ಮತ್ತೆ ಬರಲಿದೆ ವೀಕೆಂಡ್ ವಿಥ್ ರಮೇಶ್ ಸೀಸನ್ ೪"

By Zee Kannada on 3rd Apr 2019

ಝೀ ಕನ್ನಡ ಸದ್ಯ ತನ್ನ ಚಾನೆಲ್ ನಲ್ಲಿ ಮೂಡಿಬರುವ ಧಾರಾವಾಹಿಗಳು ಮತ್ತು ಮನರಂಜನಾ ಕಾರ್ಯಕ್ರಮಗಳ ಮುಖೇನ ಟಿ ಆರ್ ಪಿ ಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಮಾಧ್ಯಮ. ಟಿ ಆರ್ ಪಿ ಯಲ್ಲಿ ಝೀ ಕನ್ನಡವನ್ನು ಇನ್ನಷ್ಟು ಪ್ರಭಾವಶಾಲಿಯನ್ನಾಗಿ ಮಾಡಿದ್ದು ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ. ಈಗಾಗಲೇ ಈ ಕಾರ್ಯಕ್ರಮದ ಮೂರು ಆವೃತ್ತಿಗಳು ಮುಗಿದಿದ್ದು ಪ್ರೇಕ್ಷಕರು ನಾಲ್ಕನೇ ಆವೃತ್ತಿಗಾಗಿ ಕಾಯುತ್ತ ಕುಳಿತಿದ್ದರು. ಆದರೆ ಪ್ರೇಕ್ಷಕರ ಕುತೂಹಲಕ್ಕೆ ಇನ್ನಷ್ಟೇ ತೆರೆಬೀಳಲಿದ್ದು ವೀಕೆಂಡ್ ವಿಥ್ ರಮೇಶ್ ಸೀಸನ್ 4 ಕಾರ್ಯಕ್ರಮ ಇನ್ನು ಕೆಲವೇ ದಿನಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರಲಿದೆ. ಅಂದಹಾಗೆ ಈ ಕಾರ್ಯಕ್ರಮಕ್ಕೆ ಇಂತವರೇ ಬರಬೇಕು ಎಂದು ಪ್ರೇಕ್ಷಕರು ಅನೇಕರ ಹೆಸರುಗಳನ್ನೂ ತಿಳಿಸಿದ್ದರು ಅದರಲ್ಲಿ ಕೆಲ ಮಂದಿಯನ್ನು ಕಾರ್ಯಕ್ರಮಕ್ಕೆ ಕರೆತಂದಿತ್ತು ಝೀ ಕನ್ನಡ.


ಈಗ ನಾಲ್ಕನೇ ಆವೃತ್ತಿಯಲ್ಲಿ ಮೊದಲನೆಯವರಾಗಿ ಕಾರ್ಯಕ್ರಮಕ್ಕೆ ಯಾರು ಬರಲಿದ್ದಾರೆ ಎಂದು ಪ್ರೇಕ್ಷಕರು ತಮ್ಮ ಬುದ್ದಿಗೆ ಸಾಕಷ್ಟು ಕೆಲಸ ಕೊಟ್ಟಿದ್ದರು. ಬಲ್ಲ ಮೂಲಗಳ ಪ್ರಕಾರ ಈ ಕಾರ್ಯಕ್ರಮದ ಮೊದಲನೆಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ. ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಕರೆತಂದಿದ್ದರಂತೆ ಝೀ ಕನ್ನಡದ ರೂವಾರಿಗಳು. ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣಗಳು ಸಹ ನಡೆಯುತ್ತಿವೆಯಂತೆ ಅಂದಹಾಗೆ ಸದ್ಯ ಪ್ರೇಕ್ಷಕರಿಗೆ ಕಾರ್ಯಕ್ರಮದ ಪ್ರೋಮೋಗಳಷ್ಟೇ ಲಭ್ಯವಿದ್ದು ಕಾರ್ಯಕ್ರಮದ ಪ್ರಸಾರದ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.