ಪ್ರೇಕ್ಷಕರ ಬಹು ನೀರಿಕ್ಷಿತ ಪ್ರೆಶ್ನೆಗೆ ಮೇಘನಾ ರಾಜ್ ಉತ್ತರ

By Meghana Raj on 8th May 2019

ಮೇಘನಾ ರಾಜ್ ಕನ್ನಡದ ಬಹುಮುಖ ಪ್ರತಿಭೆ ಕನ್ನಡ ಸೇರಿದಂತೆ ಹಲವಾರು ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ. ಸುಂದರ್ ರಾಜ್ ಮತ್ತು ಪ್ರಮೀಳಾ ಅವರ ಮುದ್ದು ಮಗಳು ಮೇಘನಾ ಇತ್ತೀಚಿಗಷ್ಟೇ ನಾಯಕ ನಟ ಚಿರಂಜೀವಿ ಸರ್ಜಾ ಅವರ ಕೈ ಹಿಡಿದಿದ್ದರು. ಮದುವೆ ಬಳಿಕ ನೈ ಮೇಘನಾ ಮತ್ತೆ ಚಿತ್ರಗಳಲ್ಲಿ ಅಭಿನಯಿಸುತರ ಇಲ್ಲವ ಎಂಬ ಪ್ರೆಶ್ನೆಗಳು ಪ್ರೇಕ್ಷಕನ ಮನಸ್ಸಿನಲ್ಲಿ ಮೂಡಿದ್ದವು.


ಇದರ ಬಗ್ಗೆ ಬಹಳಷ್ಟು ಜನ ಖುದ್ದಾಗಿ ಮೇಘನಾ ಅವರನ್ನು ಕೇಳಿದ್ದು ಉಂಟು. ಅಂತೆಯೇ ಈ ಎಲ್ಲ ಅಂತೆಕಂತೆಗಳಿಗೆ ಉತ್ತರಿಸಿರುವ ಮೇಘನಾ ತಾವು ಮತ್ತೆ ಅಭಿನಯಿಸುತ್ತಿರುವುದಾಗಿಯೂ ಆ ಚಿತ್ರದ ಚಿತ್ರೀಕರಣ ಇದೆ ಮೇ 6 ನೇ ತಾರೀಖಿನಿಂದ ಶುರುವಾಗಿರುವುದಾಗಿಯೂ ತಮ್ಮ ಫೇಸ್ಬುಕ್ ಖಾತೆಯ ಮೂಲಕ ತಿಳಿಸಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ ಮತ್ತು ಈ ಚಿತ್ರದಲ್ಲಿ ತಮ್ಮ ಗೆಳೆಯ ಸೃಜನ್ ಲೋಕೇಶ್ ಅವರ ಜೊತೆ ಬಣ್ಣ ಹಚ್ಚುತ್ತಿರುವುದಾಗಿಯೂ ತಿಳಿಸಿದ್ದಾರೆ.