ಪುನೀತ್ ರಾಜಕುಮಾರ್ ನಿರ್ಮಾಣದ ಚಿತ್ರದಲ್ಲಿ "ರಾಗಿಣಿ ಚಂದ್ರನ್"

By Ragini Chandran on 12th Jan 2019

ರಾಗಿಣಿ ಚಂದ್ರನ್ ಹಿರಿಯ ನಟ ದೇವರಾಜ್ ಅವರ ಮುದ್ದಿನ ಸೊಸೆ ಮತ್ತು ಪ್ರಜ್ವಲ್ ದೇವ್ರಾಜ್ ರ ಪ್ರೀತಿಯ ಪತ್ನಿ, ಈ ಹಿಂದೆ ಹಲವಾರು ಟಿ ವಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಗಿಣಿ ಚಂದ್ರನ್ ಇದೀಗ ಚಿತ್ರಗಳಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತೆಯೇ ರಾಗಿಣಿ ಅಭಿನಯಿಸಲಿರುವ ಚಿತ್ರಕ್ಕೆ ನಟ ನಿರ್ಮಾಪಕ ಪುನೀತ್ ರಾಜಕುಮಾರ್ ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಮೂಲಕ ಬಂಡವಾಳ ಹೂಡುತ್ತಿರುವುದು ವಿಶೇಷ.


ಈಗಾಗಲೇ ನಾಲ್ಕು ಚಿತ್ರಗಳಿಗೆ ಬಂಡವಾಳ ಒದಗಿಸಿರುವ ಪುನೀತ್ ರಾಜಕುಮಾರ್ ಇದೀಗ ರಾಗಿಣಿ ಅಭಿನಯಿಸಲಿರುವ "ವಿಜಯದಶಮಿ" ಚಿತ್ರಕ್ಕೆ ಬಂಡವಾಳ ಒದಗಿಸುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ರಘು ಸಮರ್ಥ್ ಅವರ ನಿರ್ದೇಶವಿದೆ ಮತ್ತು ಬಲ್ಲ ಮೂಲಗಳ ಪ್ರಕಾರ ಈ ಚಿತ್ರದ ಶೀರ್ಷಿಕೆಯನ್ನು ಬದಲುಮಾಡಿ ಹೊಸ ಶೀರ್ಷಿಕೆಯನ್ನು ಫಿಕ್ಸ್ ಮಾಡಲು ಪುನೀತ್ ಮುಂದಾಗಿದ್ದಾರೆ.