ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದ "ಕೆ. ಜಿ. ಎಫ್ "

By KGF on 25th Dec 2018

"ಕೆ. ಜಿ. ಎಫ್" ಕನ್ನಡ ಚಿತ್ರರಂಗವನ್ನು ಬೇರೆ ಭಾಷೆಯ ಚಿತ್ರರಂಗದವರು ಒಮ್ಮೆ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡ ಚಿತ್ರ. ಬಿಡುಗಡೆಗೊಂಡ ನಾಲ್ಕು ದಿನದಲ್ಲೇ 40 ಕೋಟಿ ಭಾರಿ ಕಲೆಕ್ಷನ್ ಮಾಡಿ ನಿರ್ಮಾಪಕರ ಶ್ರಮಕ್ಕೆ ಪ್ರತಿಫಲ ನೀಡಿರುವ ಚಿತ್ರ. ಅಂತೆಯೇ ಎಲ್ಲ ಭಾಷೆಗಳಲ್ಲೂ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿರುವ ಚಿತ್ರ.


ಬಾಲಿವುಡ್ ನ ಬಿಗ್ ಹೀರೋ ಶಾರುಖ್ ಖಾನ್ ಅವರ ಅಭಿನಯದ ಜೀರೋ ಚಿತ್ರದ ಎದುರು ಬಿಡುಗೊಂಡು ಭಾರಿ ಪ್ರದರ್ಶನ ಕಾಣುತ್ತಿರುವ ಕನ್ನಡ ಚಿತ್ರ "ಕೆ. ಜಿ. ಎಫ್". ಇನ್ನೊಂದು ಅಚ್ಚರಿಯ ವಿಷಯವೆಂದರೆ ಜೀರೋ ಚಿತ್ರದೆದುರು ಬಿಡುಗಡೆಗೊಂಡಾಗ ಆ ಚಿತ್ರದೆದುರು "ಕೆ. ಜಿ. ಎಫ್" ನಿಲ್ಲುವುದು ಕಷ್ಟ ಎಂಬ ಮಾತುಗಳು ಕೇಳಿಬಂದುವು ಆದರೆ, ಅವರೆಲ್ಲ ಅಚ್ಚರಿ ಪಡುವಂತೆ ಜೀರೋ ಚಿತ್ರದ ಕಲೆಕ್ಷನ್ ಗಿಂತ "ಕೆ. ಜಿ. ಎಫ್" ಚಿತ್ರದ ಕಲೆಕ್ಷನ್ ಜಾಸ್ತಿ ಬರೋಬ್ಬರಿ 12.5 ಕೋಟಿ ಕಲೆಕ್ಷನ್ ಅನ್ನು "ಕೆ. ಜಿ. ಎಫ್" ಹಿಂದಿ ಅವತರಿಣಿಕೆಯಲ್ಲಿ ಮಾಡಿದೆ.

KGF