"ಐ ಲವ್ ಯು" ಚಿತ್ರದಿಂದ ತಮ್ಮ ತಂದೆಗೆ ನೋವಾಗಿದೆ ಎಂದ ರಚಿತಾ ರಾಮ್

By Rachita Ram on 24th Jun 2019

ಹೌದು ಈತ್ತಿಚೆಗೆ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಐ ಲವ್ ಯು ಚಿತ್ರ. ಈ ಚಿತ್ರಕ್ಕೆ ಆರ್ ಚಂದ್ರು ಅವರ ನಿರ್ದೇಶನವಿದೆ ಬಿಡುಗಡೆಗೊಂಡ ದಿನದಿಂದ ಪ್ರೇಕ್ಷಕನ ಮನಗೆದ್ದಿರುವ ಈ ಚಿತ್ರದಲ್ಲಿ ರಚಿತಾ ಮತ್ತು ಉಪೇಂದ್ರ ತುಂಬಾ ಬೋಲ್ಡ್ ಆಗೇ ಕಾಣಿಸಿಕೊಂಡಿದ್ದು ಹಸಿಬಿಸಿ ದೃಶ್ಯಗಳಿಂದ ಕೂಡಿದೆ. ಅಂತೆಯೇ ಚಿತ್ರದ ಒಂದು ಹಾಡಿನ ಬಗ್ಗೆಯೂ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ತಮ್ಮ ಬೇಸರವನ್ನು ಹೇಳಿಕೊಂಡಿದ್ದು ಸಕ್ಕತ್ ಸುದ್ದಿಯಾಗಿತ್ತು ಇದಕ್ಕೆ ಕಾರಣ ಆ ಹಾಡಿನಲ್ಲಿ ಉಪೇಂದ್ರ ಮತ್ತು ರಚಿತಾ ತುಸು ಹೆಚ್ಚೇ ಮೈಚಳಿಬಿಟ್ಟು ಅಭಿನಯಿಸಿರುವುದು ಮತ್ತು ಹಾಡಿನಲ್ಲಿ ಕೆಲ ದೃಶ್ಯಗಳು. ರಚಿತಾ ಅವರೇ ಒಂದು ಸಂಧರ್ಶನದಲ್ಲಿ ಹೇಳಿಕೊಂಡಿರುವ ಹಾಗೆ ಈ ಹಾಡನ್ನು ನೋಡಿದ ಮೇಲೆ ತಮ್ಮ ತಂದೆ ಬಹಳ ಬೇಸರಗೊಂಡಿದ್ದು ನಾನು ಅವರಲ್ಲಿ ಕ್ಷಮೆ ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಇಂತಹ ತಪ್ಪನ್ನು ಮತ್ತೆ ಮುಂದುವರೆಸುವದಿಲ್ಲ ಎಂದು ತಂದೆಯ ಬಳಿ ಕ್ಷಮೆ ಕೇಳಿದ್ದರಂತೆ.