"ಇರುವುದೆಲ್ಲವ ಬಿಟ್ಟು" ಮೇಘನಾ ರಾಜ್

By Iruvudellava Bittu on 25th Nov 2017

ಇತ್ತೀಚೆಗಷ್ಟೇ ನಟ ಚಿರಂಜೀವಿ ಸರ್ಜಾ ಅವರ ಕುಟುಂಬವನ್ನು ಸೇರಿಕೊಳ್ಳಲು ಸಜ್ಜಾಗಿರುವ ನಾಯಕ ನಟಿ ಮೇಘನಾ. ಇಬ್ಬರು ಬಹು ವರ್ಷಗಳಿದ್ದ ಪ್ರೀತಿಸಿದ್ದು ಅವರ ಪ್ರೀತಿಗೆ ಮನೆಯವರ ಬೆಂಬಲ ಸಿಕ್ಕ ನಂತರ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ನಿಶ್ಚಿತಾರ್ಥದ ನಂತರ ಅಭಿನಯಿಸಲು ಪ್ರಾರಂಭಿಸಿದ್ದಾರೆ. ಅತ್ತ ಚಿರಂಜೀವಿ ಸರ್ಜಾ ತಮ್ಮ ಚಿತ್ರಗಳಲ್ಲಿ ಬ್ಯುಸಿ ಆಗಿದ್ದರೆ ಇತ್ತ ಮೇಘನಾ ರಾಜ್ ಸಹ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


ಅಂದಹಾಗೆ ನಿಶ್ಚಿತಾರ್ಥದ ನಂತರ ಮೇಘನಾ ರಾಜ್ ಅಭಿನಯಿಸುತ್ತಿರುವ ಚಿತ್ರ "ಇರುವುದೆಲ್ಲವ ಬಿಟ್ಟು" ಚಿತ್ರದ ಶೀರ್ಷಿಕೆ ವಿಭಿನ್ನ ವಾಗಿದ್ದು ಚಿತ್ರಕ್ಕೆ ಜಲ್ಸಾ ಚಿತ್ರವನ್ನು ನಿರ್ದೇಶಿಸಿದ ಅನುಭವವಿರುವ ನಿರ್ದೇಶಕ ಕಾಂತ ಕನ್ನಲಿ "ಇರುವುದನ್ನೆಲ್ಲವ ಬಿಟ್ಟು" ಚಿತ್ರವನ್ನು ಸಹ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ಹಣಕಾಸಿನ ಜವಾಬ್ದಾರಿಯನ್ನು ದೇವರಾಜ್ ದಾವಾಗೆರೆ ಎಂಬ ಹೊಸ ನಿರ್ಮಾಪಕ ನಿರ್ವಹಿಸಲಿದ್ದಾರೆ.


ಅಂದಹಾಗೆ ಚಿತ್ರದಲ್ಲಿ ನಾಯಕನಾಗಿ "ನೀಲಿ" ಎಂಬ ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಶ್ರೀ ಅನ್ನುವವರು ನಟಿಸಲಿದ್ದಾರೆ ಜೊತೆಗೆ ಚಿತ್ರತಂಡ ತಿಲಕ್ ಶೇಖರ್ ಅವರನ್ನು ಸಹ ಸಂಪರ್ಕಿಸಿ ಕಥೆ ಹೇಳಿದ್ದು ಅವರು ಸಹ ಗ್ರೀನ್ ಸಿಗ್ನಲ್ ನೀಡಿದ್ದರಂತೆ. ಚಿತ್ರಕ್ಕೆ ರಂಗಿತರಂಗ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ವಿಲಿಯಮ್ ಡೇವಿಡ್ ಈ ಚಿತ್ರಕ್ಕೂ ಛಾಯಾಗ್ರಹರಾಗಿದ್ದರೆ ಜೊತೆಗೆ ವಿ ಶ್ರೀಧರ್ ಸಂಬ್ರಮ್ ಅವರ ಸಂಗೀತ ನಿರ್ದೇಶನದೊಂದಿಗೆ ಕೆ ಎಂ ಪ್ರಕಾಶ್ ಅವರ ಸಂಕಲನವಿದೆ.


"ಇರುವುದನ್ನೆಲ್ಲವ ಬಿಟ್ಟು" ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇರುವ ಎಲ್ಲ ಅವಕಾಶಗಳನ್ನು ಬಿಟ್ಟು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿ ಏನಾದರು ಸಾಧನೆ ಮಾಡಬೇಕು ಎಂಬ ಹಂಬಲವಿರುವ ನಾಯಕಿ ತನ್ನ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಜೀವನದ ಬೇರೆ ಯಾವೆಲ್ಲ ಅವಕಾಶಗಳನ್ನು ಕಳೆದುಕೊಳ್ಳುತ್ತಾಳೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಚಿತ್ರದಲ್ಲಿ ನಾಯಕ ಅನಾಥನ ಪಾತ್ರ ನಿರ್ವಹಿಸಿದ್ದು ಅವನಿಗಾಗುವ ತೊಂದರೆಗಳು ಮತ್ತು ಅವನಿಗೆ ಸಿಗುವ ಹೊಸ ಸಂಬಂಧಗಳ ಕುರಿತ ಚಿತ್ರವೇ "ಇರುವುದೆಲ್ಲವ ಬಿಟ್ಟು".