ಇನ್ವೆಸ್ಟಿಗೇಷನ್ ಆಫೀಸರ್ ಆದ ರಶ್ಮಿಕಾ ಮಂದಣ್ಣ

By Vrithra on 5th Jul 2018

ರಶ್ಮಿಕಾ ಮಂದಣ್ಣ ಕನ್ನಡ ಸೇರಿದಂತೆ ತಮಿಳು ಚಿತ್ರರಂಗದಲ್ಲೂ ಸದ್ಯ ಹೆಸರು ಮಾಡುತ್ತಿರುವ ನಟಿ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಈಗ ಹೊಸ ಕನ್ನಡ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ ಆ ಚಿತ್ರವೇ "ವೃತ್ರ". ಚಿತ್ರದಲ್ಲಿ ರಶ್ಮಿಕಾ ಖಡಕ್ ಇನ್ವೆಸಿಗೇಷನ್ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಈ ಪಾತ್ರಕ್ಕೆ ನ್ಯಾಯ ತಂದುಕೊಡುತ್ತೇನೆ ಎಂದು ತಮ್ಮ ಫೇಸ್ಬುಕ್ ಖಾತೆಯ ಮೂಲಕ ಹೇಳಿದ್ದಾರೆ. ಅಂದಹಾಗೆ ರಶ್ಮಿಕಾ ಮಂದಣ್ಣ ಸದ್ಯ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲೂ ಅಭಿನಯಿಸುತ್ತಿದ್ದು ತಮಿಳಿನಲ್ಲೂ ಸಹ ಮೂರು ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.