ಅಗ್ನಿಸಾಕ್ಷಿಯಿಂದ ವಿಜಯ್ ಸೂರ್ಯ ಹೊರಗೆ

By Vijay Suriya on 13th Jun 2019

ಅಗ್ನಿಸಾಕ್ಷಿ ಪ್ರಸ್ತುತ ಅನೇಕ ಪ್ರೇಕ್ಷಕರನ್ನು ತನ್ನತ್ತ ಸೆಳೆದು ವರ್ಷಗಳ ಕಾಲವಾದರು ಮುನ್ನಡೆಯುತ್ತಿರುವ ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯಲ್ಲಿ ಅಭಿನಯಿಸಿರ್ವ ಎಲ್ಲ ಕಲಾವಿದರು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೆ ಈ ಧಾರಾವಾಹಿಯಲ್ಲಿ ಅಭಿನಯಿಸಿರುವ ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿ. ಈ ಧಾರವಾಯಿಯಲ್ಲಿ ನಟ ವಿಜಯ್ ಸೂರ್ಯ ಸಿದ್ಧಾರ್ಥ್ ಪಾತ್ರದಲ್ಲಿ ಅಭಿನಯಿಸುತ್ತಿರುವು ತಮಗೆಲ್ಲ ತಿಳಿದಿರುವ ಸಂಗತಿ ಅಂತೆಯೇ ಕಥೆಯಲ್ಲಿ ಈಗಾಗಲೇ ಅನೇಕ ತಿರುವುಗಳು ಬಂದು ಪ್ರೇಕ್ಷಕರನ್ನು ಅವರ ಊಹೆಗಳು ಸುಳ್ಳಾಗುವುದೆಂದು ತಿಳಿಸಿದೆ.


ಈಗ ಪ್ರೇಕ್ಷಕರ ಊಹೆಗೂ ಮೀರಿದ ಘಟನೆ ನಡೆಯುವುದರಲ್ಲಿ ಇದೆ ಅದೇ ಧಾರಾವಾಹಿಯ ಕಥಾನಾಯಕ ಸಿದ್ಧಾರ್ಥ್ ಭಾರತ ದೇಶ ಬಿಟ್ಟು ಆಸ್ಟ್ರೇಲಿಯಾ ಗೆ ಹೋಗುವ ನಿರ್ಧಾರ ಮಾಡಿರುವದು. ಅಂತೆಯೇ ಧಾರಾವಾಹಿಯಲ್ಲಿ ಆಸ್ಟ್ರೇಲಿಯಾಗೆ ಪಯಣ ಬೆಳೆಸಿದ ನಂತರ ಸಿದ್ಧಾರ್ಥ್ ಪಾತ್ರ ಅಲ್ಲಿಗೆ ಕೊನೆಯಾಗಲಿದೆ ಎನ್ನುವುದು ನಟ ವಿಜಯ್ ಸೂರ್ಯ ಅವರೇ ಸೋಶಿಯಲ್ ಮೀಡಿಯಾ ದಲ್ಲಿ ಹೇಳಿಕೊಂಡಿದ್ದಾರೆ.


ಇದೊಂದು ಮಾಹಿತಿಯಾದರೆ ಅವರೇ ಹೇಳುವ ಪ್ರಕಾರ ಈಗಾಗಲೇ 5 ವರ್ಶಗಳ ಅಗ್ರಿಮೆಂಟ್ ಮುಗಿದಿದ್ದು ತನಗೂ ಒಂದು ಬ್ರೇಕ್ ಬೇಕು ಎಂದೆನಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಅಲ್ಲದೆ ಇತ್ತೀಚಿಗಷ್ಟೇ ವಿಜಯ್ ಮದುವೆಯಾಗಿದ್ದು ತಮ್ಮ ಕುಟುಂಬದ ಜತೆಗೂ ಕಾಲ ಕಳೆಯಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದೆಲ್ಲ ಘಟನೆಗಳಿಂದಾಗಿ ಅಗ್ನಿಸಾಕ್ಷಿ ಧಾರಾವಾಹಿಯನ್ನು ವಿಜಯ್ ಸೂರ್ಯ ಅವರಿಗಾಗಿಯೇ ನೋಡುತ್ತಿದ್ದ ಪ್ರೇಕ್ಷಕರಿಗೆ ನೋವಾಗಿರುವುದಂತೂ ಸತ್ಯ.